ನಟಿಮಣಿ ಯೊಬ್ಬಳ ಮನದಾಳದ ಹೇಳಿಕೆ
ನಟಿಮಣಿ ಯೊಬ್ಬಳ ಮನದಾಳದ ಹೇಳಿಕೆ
“ಹೋಟೆಲ್‌ಗಳಲ್ಲಿ ದಿಂಬುಗಳ ಕವರ್ ಕದ್ದಿದ್ದೆ”!
ದಿಂಬುಗಳು ಸುಖನಿದ್ರೆ ಪ್ರಾಪ್ತಿ ಮಾಡಿರಬಹುದೇ ಆಕೆಗೆ?
ಮಂದಸ್ಮಿತ ಕನಸುಗಳು ಬಿದ್ದಿರಬಹುದು ಆಕೆಗೆ?
ಹಸನ್ಮುಖಿಯಾಗಿ ನೇಸರನ
ಸ್ವಾಗತಿಸಬಹುದು ಆಕೆ?
ಗೊತ್ತಿಲ್ಲ ನನಗೆ!
ಒಂದಂತು ಗೊತ್ತಾಯಿತು ಇಂದು
ದಿಂಬುಗಳ ಕವರ್ ಕದಿಯಬಹುದೆಂದು?
ಷರಾ ಒಂದಿದೆ,
ನಟಿಮಣಿ ಮಲಗಿದ್ದ ದಿಂಬು ಆಗಲೆಂದು!!