ಹುಲಿಯೊಂದಿಗೆ ನಡೆಸಿದ ಸಂದರ್ಶನದ ಆಯ್ದ ಭಾಗ

ಮಂಜು : Good Morning ಹುಲಿರಾಯ…
ಹುಲಿ : Bad Morning Grr…
ಮ : ಯಾಕೆ ? ಏನ್ ಸಮಾಚಾರ, ಹುಷಾರಾಗಿದ್ದಿರ ತಾನೆ ?
ಹು : ಬಿಡು ಮಂಜು, ಸುಂಕದವನ ಹತ್ತಿರ ನನ್ನ ಸಂಕಟ ಪ್ರಕಟವೇನು ?
ಮ : ಈ ದಿನ ‘Tigers Day’ ಅಂತೆ, ಅದಕ್ಕೆ ನಿನ್ನೊಂದಿಗೆ ಮಾತಿಗೆ ಇಳಿದೆ, ನಿನ್ನ ಸಂತತಿ ಹೆಚ್ಚಾಗಿದೆಯೆಂತೆ ಗೊತ್ತಾಯ್ತ ?
ಹು : ಲೋ ಲೂಸು, ಮೊದಲು ನನ್ನ ಕೊಂದವರ ಲೆಕ್ಕ ಕೊಡು? ನನ್ನ ಚರ್ಮ ಸುಲಿದವರ… ಮೂಳೆ ಪುಡಿಗೈದವರ… ನನ್ನ ಹೆಣದ ಮೇಲೆ ಹಣ ಮಾಡಿದವರ…
ಮ : ಅದು ಬೇಡ, ಇತ್ತಿಚಿಗೆ ಏನ್ ಬೇಟೆಯಾಡಿ ತಿಂದೆ ?
ಹು : ಲೋ ಪಾಪಿ, ನನ್ನ ಬೇಟೆಯಾಡುವವರಿಂದ ತಪ್ಪಿಸಿಕೊಂಡರೆ ಸಾಕಾಗಿದೆ ? ಬೇಟೆ ತೀಟೆ ಬಿಟ್ಟು ಬಹಳ ದಿನಗಳಾಗೋಯ್ತು.
ಮ : ಅಲ್ಲ ಹುಲಿರಾಯ ನೀನು ಶ್ರೀ ಚಾಮುಂಡಿ, ಮಹದೇಶ್ವರ, ಅಯ್ಯಪ್ಪ ಇವರನ್ನೆಲ್ಲಾ ಹೊತ್ತುಕೊಂಡು ಕಾಡೆಲ್ಲಾ ಅಡ್ಡಾಡಿದ್ದರೂ, ಜನರಿಗೆ ನಿನ್ನ ಮೇಲೆ ಭಯ-ಭಕ್ತಿ ಇಲ್ಲದಂತಾಗೋಯ್ತು ?
ಹುಲಿ : ಶ್! ಆ ವಿಷಯ ಬೇಡ ರಾಜಕೀಯವಾಗ್ಬಿಡುತ್ತೆ.
ಮ : ನಿನ್ನ್ ಉಳಿಸೋಕೆ ಬೇಕಾದಷ್ಟು ಕಾನೂನು ಇದ್ರು, ನೀನ್ಯಾಕೆ ಬರಿ ಚಲನಚಿತ್ರಗಳಲ್ಲಿ ನಟಿಸೋಕೆ ಶುರುಮಾಡ್ದೆ.
ಹು : ಬಿಡ್ತು ಅನ್ನು, ನನ್ನ ನಿಜರೂಪ ಕಂಡ್ರೆ ದೊಣ್ಣೆ ಏಟು, ಅದಕ್ಕೆ ನನ್ನ Graphics ಮಾಡಿ ಮಕ್ಕಳಿಗೆ ತೋರಿಸೋದು.
ಮ : ಅಂತೂ ನಿನ್ದೂ ಅಂತ ಒಂದು ದಿನ ಬಂತು, ಸಂತೋಷ ಪಡು.
ಹು : ಬೇಟೆಯಿಲ್ಲ, ನೀರಿಲ್ಲ, ಕಾಡೆಲ್ಲಾ ಬೆಂಕಿ ಇಲ್ಲಾಂದರೆ ಪ್ರವಾಹ ಭೀತಿ, ವಿದ್ಯುತ್ ಬೇಲಿ, ವಿಷಪ್ರಾಷಣ, etc,. ನನ್ನ ಶ್ರಾದ್ಧ ಮಾಡುವ ದಿನ ಬಂತೇನೋ…
ಮ : ಹಾಗೆನ್ನಬೇಡ ಹುಲಿರಾಯ, ನಿನ್ನ ಉಳಿವಿಗೆ ನಿನ್ನ Plan ತಿಳಿಸು, ನಾನು ಸಂಬಂಧಪಟ್ಟವರಿಗೆ ತಿಳಿಸುತ್ತಿನಿ.
ಹು : ಮೊದಲು, ಕಾಡಿನೊಳಗೆ ಷೋಕಿವಾಲಗಳನ್ನು ನಿರ್ಭಂದಿಸಿ, ಆದೇಶಿಸಿ… hmm. ಎರಡು, Eco tourism, Resorts, ಬಾರು, ರಸ್ತೆ, ಗಣಿಗಾರಿಕೆ ನಿಲ್ಲಿಸಿ…hmm. ಮೂರು, ಕಾಡಿನ ಜನರನ್ನು ಕಾಡಿನಲ್ಲೆ ಉಳಿಸಿ… hmm. ನಾಲ್ಕು ಕಾಡು ಕಾಯುವ ಸಿಬ್ಬಂದಿಗೆ ಸರಿಯಾದ ವೇತನ ಭತ್ಯ ನೀಡಿ… hmm. ಕಾಡನ್ನು ಕಾಡಿಗಾಗಿ ಕಾಡಾಗಿಯೇ ಉಳಿಸಿ ಬೆಳೆಸಿ ಸಾಕು.
ಮ : ಥ್ಯಾಂಕ್ಸ್ ಹುಲಿರಾಯ, ಬೇಗ ಅಡಗಿಕೋ, ಓಡು, ಕೊಂದಾರು ನಿನ್ನ.
ಹು : Bye, Thanks for your concern, see you in next timee…!!!
ಡಾ|| ಜಿ ಮಂಜುನಾಥ್
29.07.2019