My Portfolio
Scroll down to discover
Search
Categories

My Blog

DENGUE ಸೊಳ್ಳೆಯೊಂದಿಗೆ ನಡೆಸಿದ ಸಂದರ್ಶನ ಆಯ್ದ ಭಾಗ

October 23, 2019Category : Reflections
DENGUE ಸೊಳ್ಳೆಯೊಂದಿಗೆ ನಡೆಸಿದ ಸಂದರ್ಶನ ಆಯ್ದ ಭಾಗ

ಪರಿವರ್ತಕ : Good Morning ಸೊಳ್ಳೆ
ಸೊಳ್ಳೆ : Very Good Morning….Bzzzz
ಪ : ಬೆಳ್ಗೆನೇ ಕಾರ್ಯಚರಣೆ ನಾ ನಿಲ್ಲು, ನಿನ್ನ ಹೆಸರೇನು?
ಸೊ :  Aedes aegypti….Bzzzz
ಪ : ಇದೇನ್ ಹಿಂಗಿದೆ? ನೀನು ಗಂಡೋ? ಹೆಣ್ಣೊ?
ಸೊ : ಲೇ ಮಗನೇ ಮರ್ಯಾದೆ. ಅದು ನನ್ನ ವೈಜ್ಞಾನಿಕ ಹೆಸರು, ನಾ ಹೆಣ್ಣು….Bzzzz
ಪ : Sorry Mam, ಅದ್ಸರಿ ಹೇಗಿದೆ ನಮ್ಮ ಬೆಂಗಳೂರು ಮಹಾನಗರ?
ಸೊ : ಸ್ವರ್ಗ ಕಣ್ಲ…..ನನ್ನ ರಕ್ತ ಬಿಜಾಸುರ ಕುಲಬಾಂಧವರು Full ಕುಶ್, ನಮ್ಗೆ Full Blood Meals….Bzzzz
ಪ : Oh! Great, ಅದು ಹೇಗೇ ವಿವರಿಸ್ತಿಯಾ ಚಿನ್ನ?
ಸೊ : ಕೇಳುಸ್ಕೊ , ನಗರವೆಲ್ಲಾ ಕಸದ ತೊಟ್ಟಿ, ಗಬ್ಬು ನಾರುವ ರಾಜಕಾಲುವೆ, ಮಹಾಜನತೆ ಬಿಸಾಡುವ ಟನ್‌ಗಟ್ಟಲೆ ತ್ಯಾಜ್ಯ, ಗಲ್ಲಿ ಗಲ್ಲಿಗಳಲ್ಲಿಯೂ ಬಾಯಿತೆರೆದಿರುವ ನಮ್ಮ ವಂಶಾಭಿವೃಧ್ಧಿ Labour Wardsಗಳು…..Sample ಸಾಕಾ?
ಪ : ಸಾಕು ಸಾಕು. ಚೆಲುವಿ ನಿನ್ನ ಸಂತತಿ/Species ಎಷ್ಟಿರಬಹುದು? ನೀನು ಎಷ್ಟು ದೇಶಗಳ ಸಂಚಾರಣಿ? GK ಅಂತ ಕೇಳಿದೆ?
ಸೊ : ಓ ಅದಾ! ನಮ್ಮದು ಸುಮಾರು 3500 Species , 100 ದೇಶಗಳಗೂ ಹೆಚ್ಚು ತಿರುಗಾಟ ನಡೆಸಿ, ಜನರ ರಕ್ತದೋಕುಲಿ ಜೊತೆ ಚೆಲ್ಲಾಡಿ, ವೈರಾಣು ಹಂಚುತ್ತಾ ಲೆಕ್ಕಕೆ ಸಿಗದಷ್ಟು ತಲೆಬುರಡೆಗಳನ್ನಾ ಹೊಡೆದುರುಳಿಸಿದ್ದೆವೆ….Bzzzz
ಪ : OMG!  ಭಯವಾಗುತ್ತೆ. ಅದೇನು ನೀವು ಹಗಲೋತ್ತೆ ಜಾಸ್ತಿ ಕಚ್ಚೊದು?
ಸೊ : ಲೋ ಮೂರ್ಖ, ಹಗಲೋತ್ತು ಜನ ಸೊಳ್ಳೆ ಪರ್ದೆ ನೆತ್ತಾಡ್‌ಕೊಂಡು ತಿರ್‌ಗಾಡಲ್ಲಾ, ನಿರುದ್ಯೊಗಿ, ಸೋಮಾರಿ ಹಾಗೂ ಕುಡುಕರಿಗೆ ನಾವು ಕಚ್ಚುವುದೇ ತಿಳಿಯುವುದಿಲ….Bzzzz
ಪ : ಹಾಗಾದರೆ ರಾತ್ರಿ ಯಾಕೆ ನಿನ್ನ ರಕ್ತದಾಚರಣೆ ಇರಲ್ಲ?
ಸೊ : ಥೂ! ಬೆತ್ತಲೆ ದೇಹಗಳು, ಗೊರಕೆ ಶಬ್ದ, Farting Siren…Fss I don’t like it you know!
ಪ : Oh! ನಿನಗೆ English ಬರುತ್ತಾ?
ಸೊ : I am Poliglot. Virus carrying ambassador and Global citizen.
 : ಅಬ್ಬಾ! ಎಷ್ಟೊoದು ವಿಚಾರ. ಹಾಗಾದರೆ ನಿಮ್ಗೊಳಿಂದ ಆಸ್ಪತ್ರೆಗಳೂ ವೈದ್ಯರಿಗೆ ಒಳ್ಳೆ ಲಾಭ. ನಿಮ್ Photo ಇಟ್ಕೊಡು ಪೂಜೆ ಮಾಡ್‌ತ್ತಾವರಂತೆ?
ಸೊ : 1೦೦%. ಬೆಂಗಳೂರಿನ ಯಾವ ಆಸ್ಪತ್ರೆಗಳಲ್ಲ್ಲೂ  Beds ಖಾಲಿ ಇಲ್ವಂತೆ. House full Board
ನಾನೇ ನೋಡಿ ಬಂದೆ….. Bzzzz
ಪ : ಸ್ವಲ್ಪ ತಡಿ ನನ್ನ ಪ್ರಿಯೆ Message ಕಳಿಸಿ ನಿಮ್ನೊoದು ಪ್ರಶ್ನೆ ಕೇಳು ಅಂತ Request ಕಳ್ಸೊವ್ರೆ, ‘Jeans Pant ಹಾಕೊಂಡ್ರೆ ಕಚ್ಚುತ್ತಿಯಾ’?
ಸೊ : ತುಂಬಾ Easy, Tight Fittings ನಲ್ಲಿ ನನ್ನ ಮೊನಚಾದ ಕೊಂಡಿಗೆ ರಕ್ತ Free ಆಗಿ Flow ಆಗುತ್ತೆ….Bzzzz
ಪ : ಅಬ್ಬಾ! ನಿನ್ನ Genes ಪರಮಾಣುಗಿಂತ Strong ಕಣಮ್ಮ !
ಸೊ : ಬೇಗ ಮುಗಿಸು ರಕ್ತ ಕುಡಿಬೇಕು….Bzzzz
ಪ : ನಿನ್ನ ಸಂತತಿಯ ಮಾರಣ ಹೋಮಕ್ಕೆ ಅಂತ್ಯವಾಡಲು ಕೋಟಿಗಟ್ಟಲೆ ಖರ್ಚುಮಾಡುತಿದ್ದಾರಂತೆ?
ಸೊ : ಸೂರ್ಯ ಚಂದ್ರರು ಇರುವರೆಗೂ ನನ್ನ ನಾಶ ಯಕಶ್ಚಿತ್ ನರ ಮನುಷ್ಯನಿಂದ ಸಾಧ್ಯವಿಲ್ಲ ತಿಳಿತೆ ಮೂರ್ಖ.
Bye, ಇಲ್ಲೊಬ್ಬ ನಾಗರೀಕ ಕುಡಿದು ಗುಂಡಿಯೊಳಗೆ ಬಿದವ್ನೆ. Attack…..ರಕ್ತದೊಂದಿಗೆ ಬೀರು ವ್ಹಾ !!

Manjunath G
03.08.2019
(ಸೊಳ್ಳೆ ಕೈಯಿಂದ ತಪ್ಪಿಸಿಕೊಂಡ್ತು, ಸಿಕ್ಕಿದಾಗ ಸಂವಾದ ಮುಂದುವರೆಯಲಿದೆ)

Leave a Reply

Your email address will not be published.