ಕಾರ್ಮಿಕನೊಂದಿಗೆ LORD ಗಣೇಶ ನಡೆಸಿದ ಸಂವಾದದ ಆಯ್ದ ಭಾಗಗಳು.

ಗಣೇಶ್ವರಾಯ : Hi ! ಗೌರಿ ಗಣೇಶ ಹಬ್ಬದ ಶುಭಾಶಯಗಳು
ಕಾರ್ಮಿಕ: ಧನ್ಯವಾದಗಳು, ವಕ್ರತುಂಡಾಯ ನಮೋ ನಮಃ.
ವಿನಾಯಕಾಯ : ಏನ್ಭಕ್ತ ಮುಖ-ಮೈಯಲ್ಲಾ ಮುದುಡಿ ಬಾಡಿದೆ?
ಹಬ್ಬದ ಸಂಭ್ರಮಾಚರಣೆ ಕಾಣ್ತಿಲ್ಲ !
ಕಾ : ಏನ್ಹೇಳೋದು ಸ್ವಾಮಿ, ಕೆಲ್ಸ ಇಲ್ಹಾoತ ಪ್ಯಾಕ್ಟರಿಯಿಂದ ಹೊರಗೆ
ಹಾಕಿದ್ದಾರೆ, ಕೈಯಲ್ಲಿ ಬಿಡಿಗಾಸಿಲ್ಲ !
ವಿಘ್ನರಾಜಾಯ : ಹೌದೇ ಎಂಥಹ ಸಂಕಷ್ಟ – ವಿಘ್ನ? ನನ್ನ ಭಕ್ತರಿಗೆ ! ಮುಂದೆ?
ಕಾ: ಗಣೇಶ ಪೆಂಡಾಲ್ಗಳಲ್ಲಿ ಸಿಗೋ ನಿನ್ನ ಪ್ರಸಾದವೇ ಗತಿ, ಅದಕ್ಕೂ
ಕ್ಯೂ ಆಧಾರ್ಕಾರ್ಡ್ನೊಂದಿಗೆ.
ಗೌರಿಪುತ್ರಾಯ : ಒಪ್ಪತ್ತಿಗೂ ತಾತ್ವಾರವೇ ? ಅದಿರಲಿ ನಿನ್ನ ಸಂಸಾರ ? ಹೆಂಡ್ತಿ ಮಕ್ಕಳು ?
ಕಾ : ನಾನು ಬ್ರಹ್ಮಚಾರಿ ಅಲ್ಲ ದೇವ, ಹಾಗಂತ ನಿನ್ಹoಗೆ ಇಬ್ಬರು ಹೆಂಡ್ತೀರಿಲ್ಲ OK !
ನಮ್ಮಿಂದ ಇಬ್ಬರು ಹುಟ್ಟೋವೆ.
ಸ್ಕಂದಾಗ್ರಜಾಯ : ಆಯ್ತು ! ಭಕ್ತ ನಿನ್ನ ಸಂಬಳ ಎಷ್ಟು?
ಕಾ : ಸಂಬಳ ಮಾತ್ರ ಕೇಳ್ಬೇಡಿ ಗೌರಿಪುತ್ರ !
ಸ್ಥೂಲಕಾಯದ ನೀನು ಬೇಗ ಕರಗಿ ಹೋಗ್ತಿಯಾ !
ಅವ್ಯಯಾಯ : ಯಾಕೆ? ಭಕ್ತ M W Act ಇದೆಯಲ್ಲಾ? ಅದಾದರೂ ಸಿಗುತ್ತಲ್ಲ ?
ಕಾ : ಸ್ಥಿರಾಯ ನೀನೆಲ್ಲಿದ್ದಿಯಾ? ಕಾಯ್ದೆ 1948 ಆದರೂ 2019ರಲು ನಮಗೆಲ್ಲ
ಸಿಗುತ್ತಿರೋದು “poverty wages”
ಪೂತಾಯ : ಹೌದೇ ? ಇನ್ನು Bonus, Gratuity, Pension, Equal Remuneration, EPF, ESIC,
Social security ಅಬ್ಬಬ್ಬಾ ನನ್ನಅಷ್ಟೋತ್ತರ ಶತನಾಮಾವಳಿ
ಮಿರುತ್ತೆ ಕಾರ್ಮಿಕ ಭಕ್ತರಿಗೆ ಸಿಗುತ್ತಿರುವ ಸೌಲಭ್ಯ ? ನಿಜತಾನೆ ?
ಕಾ : ವೃದ್ದಿದಾಯ ಎಲ್ಲವೂ ಇದೆ, ಆದರೆ ಯಾವುದೂ ಸಿಕ್ತಿಲ್ಲಾ,
ಎಲ್ಲಾ ಮರೀಚಿಕೆ, ಅಗೋಚರ, ಭ್ರಮೆ.
ವಕ್ಷದ್ಯಕ್ಷಾಯ: I see, what a disaster?
ಆಯ್ತು ಮಾಸಿಕ ವೇತನ ಎಷ್ಟು ಹೇಳು?
ಕಾ : Rs 13,000 ನನ್ನೊಡೆಯ.
ದ್ವಿಜಪ್ರಿಯಾಯ: ಸಾಕಾಗಿಲ್ವ? ಅದರಲ್ಲಿ ಎಷ್ಟು ಮಂದಿ ಉಣ್ಣ ಬೇಕು ?
ಉಡಬೇಕು? ಖರ್ಚು ಹೇಳು ನೋಡೋಣ ?
ಕಾ : ಇಗೋ ಕೇಳು ಸೃಷ್ಟಿಕರ್ತನೇ ನಮ್ಮ ಗೋಳು !
ಮನೆಯಲ್ಲಿ ನಾನು, ನನ್ನ ಸುಂದರಿ, ನಮ್ಮಿಬ್ಬರು
ಮಕ್ಕಳು ಮತ್ತು ನನ್ನ ವಯೋವೃದ್ಧ ತಂದೆ ತಾಯಿಯರು
ಒಟ್ಟುಆರುಮಂದಿ.
ಸರ್ವಸಿದ್ದಿ-
ಪ್ರದಾಯಕಾಯ : ಆರು ಮಂದಿ, ಮುಂದೆ ?
ಕಾ : A) 13000 ÷ 6 = Rs 2166 ಒಬ್ಬರಿಗೆ ಒಂದು ತಿಂಗಳಿಗೆ
2166 ÷ 30 = Rs 72 ಒಬ್ಬರಿಗೆ ಒಂದು ದಿನಕ್ಕೆ
72 ÷ 3 = Rs 24 ಒಂದೊತ್ತು ಊಟಕ್ಕೆ
ಸರ್ವಾರ್ಥಕಾಯ : ಅಂದರೆ ಒಬ್ಬರಿಗೆ ಒಪ್ಪತ್ತು ಊಟಕ್ಕೆ
Rs 24. ..! Less than a $ per day per Person.
ಕಾ : ದೇವ ಇನ್ನು ಇದೆ ಲೆಕ್ಕ! ಇಲ್ಲಿ ನೋಡು
B) ಮನೆ ಬಾಡಿಗೆ – 5000
ವಿದ್ಯುತ್ಬಿಲ್ -500
ನೀರಿನ ಬಿಲ್ -100
ಮಕ್ಕಳ ಶಿಕ್ಷಣ -1000
BMTC Pass- 1100
ವೈದ್ಯಕೀಯ ವೆಚ್ಚ – 1500
ನನ್ನ, ನನ್ನವಳ
Cell Phone Recharge – 1000
ಹಾಲು – 1000
ಗ್ಯಾಸ್ – 800
ಸಾಲದಬಡ್ಡಿ–1000
13000
ಬುದ್ಧಿಪ್ರಿಯಾಯ: ಸ್ವಲ್ಪ ತಡಿ ಕವಿ ನಾನು, data analyst ALLA
ನಿನ್ನ ವೇತನ (A) ಗೊ, (B) ಗೊ
A ಗೆ ವ್ಯಯ ಮಾಡಿದರೆ
B ಗೆ ಶೂನ್ಯ
B ಗೆ ವ್ಯಯಿಸಿದರೆ, A ಗೆ ಗುನ್ನ!
ಕಾ: You are A Perfect Data Analyst
ಇದು ಮೂಷಿಕವಾಹನನೆ ಕಾರ್ಮಿಕ ಪ್ರಪಂಚ.
ಶಾಂತಾಯ : OMG ! What a crisis ?
ಬದುಕು ಇಷ್ಟು ದುಸ್ತರವೆ? ಡೋಳು ಕುಣಿತ, ಬಾಜ-ಬಜಂತ್ರಿ
ನೋಡಿ, India is Shining! ಅಂದ್ಕೊಂಡಿದ್ದೆನಲ್ಲಯ್ಯಾ?
ಕಾ : ಏಕದಂತ ! ಇದು ನನ್ನೊಬ್ಬನ ಕಥೆಯಲ್ಲಾ ?
40 ಕೋಟಿ ಭಾರತೀಯರ ಕಥೆ ಸ್ವಾಮಿಪ್ರಸನ್ನತ್ತ್ಮಾನೇ.
ಚತುರಾಯ: ನಿಷ್ಪ್ರಿಯವಾಗಿದೆಯಾ ವ್ಯವಸ್ಥೆ? Is this
Public Governance & Poverty Alleviation?
ಕಾ : ಅಪ್ಪ ಲಂಬೋದರ ನನಗೊಂದು ಗೊತ್ತಿಲ್ಲ ನಮ್ಮನ್ನುದ್ದಾರ
ಮಾಡೋ ತಂದೆ! ನಾನು ಬಡವ ನಿನಗೆ ಭಾರಿ ಚಿನ್ನದಾರ
ಹಾಕಲಾರೆ, ಗರಕೆ ಹುಲ್ಲನ್ನು ಶುದ್ಧ ಕಣ್ಣಿರಿನಿಂದ ಒರಸಿ
ಅರ್ಪಿಸುತ್ತಿದ್ದೇನೆ, ತಂದೆ ಸ್ವೀಕರಿಸು. . .
ಹೇರಂಬಾಯ: ಅಯ್ತು..! ನಿಮ್ಮ ಜನ ನನ್ನನ್ನು ಕೆರೆ, ಕುಂಟೆ, ಬಾವಿ, ಸಮುದ್ರ ಹೀಗೆ
ಸಿಕ್ಕ ಸಿಕೆಲ್ಲಾ ಕಡೆ ಮುಳಿಗಿಸೋ ಮುಂಚೆ ನಿಮ್ಮ Leaders
ಗೆ “ಜ್ಞಾನೋದಯ” ಆಗಲಿ ಅಂತ ಹರೆಸಿ ಮುಳುಗುತ್ತೇನೆ. . .Bye
ಕಾ : ದೇವಾ… ಮುಳಗದಿರು, ಸರ್ವಸಿದ್ದಿ ವಿನಾಯಕ ಕಾಪಾಡು. . .
ದೇವಾ. . .ಮುಳಗದಿರು…
ಅಗ್ರಗಣ್ಯಾಯ : ಮರೆತೆ. . .ನಿನ್ನ ಭೇಟಿ ನನ್ನ ಕಣ್ಣಲಿ ರಕ್ತ ತಂದಿದೆ ಸ್ವಲ್ಪ ಜಾಸ್ತಿ ಕುಂಕುಮ
ಎರೆಚಲಿ, ರಕ್ತದ ಕಲೆ ನೀರಲ್ಲಿ ಕಾಣದಿರಲಿ.. . Bye.
ಕಾ : ದೇವಾ. . .ಹೋಗು…ಅತ್ತ ನೀನು ನೀರಲ್ಲಿ
ಮುಳಿಗೇಳು ! ನಾನು ಈ ಭೂಮಿಯಲ್ಲಿಯೇ ಮಣ್ಣಾಗುತ್ತೇನೆ. . .
ಡಾ|| ಜಿ ಮಂಜುನಾಥ್
02-09-2019