My Portfolio
Scroll down to discover
Search
Categories

My Blog

ಪೂಜಾರಿ ದೇವರೊಂದಿಗೆ ನಡೆಸಿದ ಸಂಭಾಷಣೆಯ ಆಯ್ದ ಭಾಗ

May 1, 2022Category : Reflections
ಪೂಜಾರಿ ದೇವರೊಂದಿಗೆ ನಡೆಸಿದ ಸಂಭಾಷಣೆಯ ಆಯ್ದ ಭಾಗ
ಪೂಜಾರಿ: Good morning my dear deity! ಏನ್ ಮುಖದಲ್ಲಿ ಕಮಲ ಅರಳಿದಂತಿದೆ? ಮಂದಸ್ಮಿತ ನಗು ಎದ್ದು ಕಾಣುತ್ತಿದೆ. ಏನ್ ಕಾರಣ ಪ್ರಭು?
ದೇವ: ಲೋ Manager ಕೇಳೋ ಇಲ್ಲಿ...
ಪೂಜಾರಿ: ಸ್ವಾಮಿ ಪರಮಾತ್ಮ, ಎನ್‌ನಿಮ್‌ ಮಾತ್‌ನ ವರಸೆ
ನನ್ನ Manager ಅಂತೀರಾ? ತಲತಲಾಂತರದಿಂದ, ಶತಶತಮಾನಗಳಿಂದ ನಮ್ಮ ಪೂರ್ವಿಕರು ನಿಮ್ಮನ್ನು ಆರಾಧಿಸುತ್ತಾ, ಪೂಜಿಸುತ್ತಾ ನಮ್ ದೇವು ಅಂತ ಹಗಲುರಾತ್ರಿ ಬಾಯಿ ಬಿರಿಯಂಗ ಮಂತ್ರ ಊದವೆ
ದೇವ: ನಿಲ್ಲಿಸೊ ನಿನ್ನ ಆರ್ಭಟ ಲೋ ಭಟ್ಟ!
ಓದಲಿಲ್ವೇನೋ ಮಾನ್ಯ ಸರ್ವೋಚ್ಛ ನ್ಯಾಯಾಲಯದ ತೀರ್ಪು? ನೀನೆಲ್ಲಿ ಓತ್ತಿ, ಬರಿ business dealings ಮಾಡ್ತಿ. 
ಪೂಜಾರಿ: ಕಿವಿಗೆ ಬಿತ್ತು. ಅಂದರೆ ದೇವಸ್ಥಾನದ ಜಾಗ ಭೂ ದಾಖಲಾತಿಗಳಲ್ಲಿ ನಿನ್ನ ಹೆಸರಲ್ಲಿ ಸೇರಿಸ್ ಬೇಕಂತೆ, ಭೂಮಂಡಲದ ಒಡೆಯನಿಗೆ ಭೂದಾಖಲೆ ಬೇಕೆ? ಬೇಡ ಭುವಿಯ ಆಸೆ ಸ್ವಾಮಿ.
ದೇವ: ಲೋ 'ಭೂಮಿಸ್ವಾಮಿ' ನೀನು, ನಿಮಿತ್ತ, ನಾನು ಅನಂತ, ಸಕಲ ಭೂ-ಚರಾಚರ ಎಲ್ಲಾದಕ್ಕೂ ನಾನೇ ಒಡೆಯ, ಅಧಿಕೃತವಾಗಿ ಕಂದಾಯ ದಾಖಲೆಗಳಲ್ಲಿ ಇರುತ್ತೇನೆ. 
ಪೂಜಾರಿ: ಅಲ್ಲ ದೇವ ಗರ್ಭಗುಡಿಯಲ್ಲಿ ಕಲ್ಲಾಗಿರುವ ನೀನು, sub-registrar ಕಛೇರಿಗೆ ಅಲೆದು, ಕ್ಯೂನಲ್ಲಿ ನಿಂತು, ಲಂಚ ತೆತ್ತು, ಬಾಕಿ ಕಂದಾಯ ಕಟ್ಟಿ, ಪಾಣೆ-ಗೀಣಿ ಅಂತ ಯಾಕೆ ಒದ್ದಾಡುತ್ತೀಯಾ? ತೆಪ್ಪಗೆ ನಾ ನೀಡೊ ನೈವೇದ್ಯ ಸ್ವೀಕರಿಸು
ದೇವ: ಲೋ ಮಗನೇ, ನಾನೇ ಸರ್ವೋತ್ತಮ ಅಂತ ಸರ್ವೋಚ್ಚ ನ್ಯಾಯಾಲಯ ತೀರ್ಪಿತ್ತ ಮೇಲೆ, ನಿನ್ನದೇನೋ ಕಿತಾಪತಿ,   

Leave a Reply

Your email address will not be published.